
ಗುಬ್ಬಿ ತಾಲ್ಲೂಕಿನ ಹರಿದೇವನಹಳ್ಳಿ ಗ್ರಾಮದಲ್ಲಿ ಇದಕ್ಕಿದಂತೆ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಗೆ ಹರಿದೇವನಹಳ್ಳಿ ಗ್ರಾಮದ ಜೈರಾಮ ಹಾಗು ಬೆಟ್ಟಸ್ವಾಮಿ ಎಂಬುವವರ ಎರಡು ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿದ್ದು ಮನೆಯಲ್ಲಿದ್ದ ದಿನಸಿ ವಸ್ತುಗಳು ಸೇರಿದಂತೆ ಬೆಲೆಬಾಳುವ ವಸ್ತುಗಳು ಹಾಗೂ ದಿನನಿತ್ಯದ ಪಾತ್ರೆ ಸಾಮಾನುಗಳು ಹಾಗೂ ಬಟ್ಟೆಗಳು ಸುಟ್ಟು ಕರಕಲಾಗಿದ್ದು ಎರಡು ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದ್ದು ಬೀದಿಗೆ ಬಂದು ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಬೆಂಕಿ ಅವಘಡ ಯಾವ ಕಾರಣಕ್ಕೆ ಸಂಭವಿಸಿತೆಂದು ತಿಳಿದು ಬಂದಿಲ್ಲ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೋಲೀಸ್ ರವರು ಮೊಕ್ಕಾಂ ಹೂಡಿದ್ದರು.

